nenapike barabaradhu neenu,,,,

Go down

nenapike barabaradhu neenu,,,, Empty nenapike barabaradhu neenu,,,,

Post  Admin on Sat 02 Feb 2008, 10:21

ಸಾದ್ಯವಾದಷ್ಟು ದೂರವೇ ಇರು
ಸಾದ್ಯವಾದರೆ ತೊಲಗು ನೀನು
ದಿಕ್ಕುಗಳೇ ಇರಬಾರದು ನಿನಗೆ
ದಾರಿಗಳೆಲ್ಲ ಚಕ್ರವ್ಯೂಹಗಳಾಗಬೇಕು
ಮತ್ತೆ ನನ್ನೊಳಗಿಳಿಯಲು ಹೊರಟೀಯ ಜೋಕೆ
ಈ ದಿನದಿಂದ ದೈವ ನನ್ನ ಜೊತೆಗಿದೆ ದ್ರೋಹಿ
ಇಷ್ಟು ದಿನ ನೀನು ನನ್ನ ಜೊತೆಗಿದ್ದ ಹಾಗೆ!

ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
ಮರುಭೂಮಿಯಲ್ಲಿ ಮಲ್ಲಿಗೆ ಬೆಳೆಯುವುದಿಲ್ಲವೆಂಬ
ಸತ್ಯವನ್ನ ನನ್ನ ಕನಸುಗಳಿಗೆ ನಾನು ಹೇಳಬೇಕಿದೆ!

ಸಾದ್ಯವಾದರೆ ಮತ್ತೆ ನೀನು
ನನ್ನ ನೆನಪಿಗೆ ಬರಬಾರದು
ಈಗಷ್ಟೆ ಕನಸುಗಳ ದಫನ್ ಆಗಿದೆ ಇಲ್ಲಿ
ಮತ್ತೆ ಅವು ಚಿಗುರೊಡೆಯಬೇಕಲ್ಲವ?
ಚಿಗುರೊಡೆಯುವ ನನ್ನ ಕನಸುಗಳಿಗೆ
ನಾನು ಅಸುನೀಗಿದ ಕತೆಯ ಹೇಳಬೇಕಿದೆ..

Courtesy : Soma
http://navilagari.wordpress.com/

Admin
Admin
Admin

Number of posts : 30
Registration date : 2008-01-27

View user profile http://theaters.forumotion.com

Back to top Go down

Back to top


 
Permissions in this forum:
You cannot reply to topics in this forum